ತಿಳಿಬಾನು ತಂಪಾಗಿ ಮಳೆಬಿಲ್ಲು ತರಲು ತಿಳಿಮನಸ ಕದ ತೆರೆದು ಕನಸೊಂದು ನಗಲು ತಂಗಾಳಿ ತಣ್ಣೀರ ತೊರೆದಾಟಿ ಬರಲು ಉಸಿರೊಂದು ತುಟಿದಾಟಿ ನುಡಿವಂತೆ ಕೊಳಲು

ಮುಂಜಾನೆ ಮಂಜಿರುಳು ಮರೆಯಾಗೋ ಕಾಲ ಮನದಾರಿ ಮಧುಮಾಸ ಮುದನೀಡೋ ಮೇಳ ಅರೆಗಳಿಗೆ ಗರಿಗೆದರಿ ನಲಿದಾಡೋ ನವಿಲು ಎನ್ನೆದಯಲ್ಲಿ ಅನುರಾಗ ಆವರಿಸುವ ಅಮಲು

ಒಲವೇ.... ಪರವಶ ಪರಿಚಯ ನನ್ನೊಲವೇ ಮನವೇ.... ಎನ್ನುಸಿರಾ ಹೆಸರೇ ನೀ ಮನವೇ..

ಮನವೇ ನಿನ್ನ ಕಾಣಾದಿರೆನ್ನ ಅನುರಾಗಿಯ ಕ್ಷಣವೆಲ್ಲಾ ಹುಡುಕಾಟ ಕೇಳೆ ಕೊಲುವಂಥಾ ಮುನಿಸೊಂದು ಕಾಡೀದರೆನ್ನ ಅಲೆಮಾರಿಯ ಕನಸೆಲ್ಲಾ ಚೂರಾಗೋ ವೇಳೆ

ಎದೆಯಲ್ಲಿ ಬಚ್ಚಿಟ್ಟ ನೂರಾರು ಮಾತು ಎದುರಲ್ಲಿ ನಿಂತಾಗ ಇನ್ನೂನು ಹೆಚ್ಚೆಚ್ಚು ಹಿತವಾದ ನಗುವೊಂದು ಮನಸನ್ನು ಕಾಡಿ ನೂರಾರು ವರ್ಣಗಳಾಗಿ..

ಹಿಡಿತಕ್ಕೆ ಸಿಗದೆ ಹಿತವಾಗಿ ನಿಂತೆ ಪ್ರಣಯಕ್ಕೆ ಹೊಸದಾದ ಪರಿಭಾಷೆ ನೀನೆ

ಗಮನಕ್ಕೆ ಬರದೆ ಗುರುತಿನ್ನೂ ಸಿಗದೇ ತನುವೆಲ್ಲಾ ತೇಲಾಡೋ ಅಲೆ ನೀ ಮನವೇ.. ಒಲವೇ...

ಮುಂಜಾನೆ ಮಂಜಿರುಳು ಮರೆಯಾಗೋ ಕಾಲ ಮನದಾರಿ ಮಧುಮಾಸ ಮುದನೀಡೋ ಮೇಳ ಅರೆಗಳಿಗೆ ಗರಿಗೆದರಿ ನಲಿದಾಡೋ ನವಿಲು ಎನ್ನೆದಯಲ್ಲಿ ಅನುರಾಗ ಆವರಿಸುವ ಅಮಲು

ಒಲವೇ.... ಪರವಶ ಪರಿಚಯ ನನ್ನೊಲವೇ ಮನವೇ.... ಎನ್ನುಸಿರಾ ಹೆಸರೇ ನೀ ಮನವೇ.. ಓ.. ಓ...

avinash shettigar ganesh karanth

    All notes